೧.ಗೋಮಾಂಸ ಭಕ್ಷಣೆ ನಮ್ಮಲ್ಲಿ ಇತ್ತೆ ?

೨.ಗೋಮಾಂಸವನ್ನು ರದ್ದು ಮಾಡುವುದು ಸೆನ್ಸಿಬಲ್ ಆದ ವಿಚಾರವೇ ?

ಈ ಎರಡು ಪ್ರಶ್ನೆಗಳು, ಗೋ ಮಾಂಸದ ವಿಚಾರ ಬಂದಾಗಲೆಲ್ಲ, ಒಂದು ಗುಂಪಿನವರು ದಾಳಿ ಮಾಡುವ ವಿಚಾರವಾದರೆ ಇನ್ನೊಂದು ಗುಂಪು ಈ ಬಗ್ಗೆ ಅಧ್ಯಯನವಿಲ್ಲದ ವಾದ ಮಾಡಿ ನಗೆಪಾಟಲಿಗೀಡಾಗುವುದು ನಿತ್ಯ ಕ್ರಮವಾಗಿಬಿಟ್ಟಿದೆ. ಈ ಬಗ್ಗೆ ಹಿಂದೆ ಮಿತ್ರ ಓದುಗರೊಬ್ಬರು ಇದೇ ಪ್ರಶ್ನೆ ಮಾಡಿದ್ದರು. ನಾನು ಉತರಿಸಿದ್ದೆ, ಆಗಾಗ ಯಾರದರೂ ಇನ್ನಾವ ರೀತಿಯಲ್ಲೋ ಇದನ್ನು ಕೇಳುತ್ತಲೇ ಇರುತ್ತಾರೆ. ಆದ್ದರಿಂದ ಕೆಳಗಿನ ಉತ್ತರ, ಅರಿವಿಗೆ ಸಹಾಯ ಮಾಡಲಿ.

೧.ಹೌದು, ವೇದ ಕಾಲೀನ ಯುಗದಲ್ಲಿ ಗೋ ಮಾಂಸ ಭಕ್ಷಣೆ ಇತ್ತು. ಯಾಗಗಳಲ್ಲಿಯೂ ಕೂಡ ಮಾಂಸವನ್ನು ಬಳಸಲಾಗುತಿತ್ತು[1]. ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಈ ಬಗ್ಗೆ ಹೇಳಿಕೆ ಇದೆ[2]. ಮಹಾಭಾರತದ ಮೂಲ ರೂಪವಾದ ‘ಜಯ’ದಲ್ಲೂ ಹೇಳಿದೆ[3]. ಆಜ್ಯ ಎಂದರೆ ಮೇಕೆಯ ಮಾಂಸ ಅಥವಾ ಅದರಿಂದ ತೆಗೆದ ಕೊಬ್ಬು ಎನ್ನಬಹುದು. ಬ್ರಾಹ್ಮಣರು ಕೂಡ ಮಾಂಸ ಭಕ್ಷಣೆ ಮಾಡುತ್ತಿದ್ದರು. ಯಾಗದಲ್ಲಿ ಇಂದಿನಂತೆ ಪೂರ್ಣಾಹುತಿ ಎಂದರೆ ರವಿಕೆ ಬಟ್ಟೆ ಹಣ್ಣು ನೀಡುತ್ತಿರಲಿಲ್ಲ, ಇತರ ಮಾಂಸವೇ ಆಗಿರುತ್ತಿತ್ತು. ಇಂದಿಗೂ ಸೋಮಯಾಗದಲ್ಲಿ ಪ್ರಾಣಿ ಬಲಿಯು ಅಲ್ಲಲ್ಲಿ ನಡೆಯುತ್ತದೆ. ಆಗಿನ ಆಹಾರ ಪದ್ಧತಿಯಲ್ಲಿ ಎತ್ತಿನ ಮಾಂಸ ಪ್ರಮುಖವಾಗಿತ್ತು[4]. ಮಹಾಭಾರತದ ವೇಳೆಯಲ್ಲಿ ಗೋ ಮಾಂಸ ಭಕ್ಷಣೆ ಕಡಿಮೆಯಾಗಿ, ಎತ್ತಿನ ಮತ್ತು ಆಡಿನ ಮಾಂಸವನ್ನು ಅಂದಿನ ಕಾಲದ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ ಅಥವಾ ವಿಶ್ ವರ್ಗದವರು (ಮೂರೇ ವರ್ಗವಿದ್ದದ್ದು) ಸೇವಿಸುತ್ತಿದ್ದರು.

ಆಧಾರ ಸೂಚಿ

1.ಋಗ್ವೇದ ಸಂಹಿತೆ (೧೦.೮೬.೧೪) (೧೦.೨೭.೨)

2.ಯಾಜ್ಞವಲ್ಕ್ಯ ಸ್ಮೃತಿ, ಗೃಹಸ್ಥ ಧರ್ಮ ಪ್ರಕರಣ: (೧೦೯)

3.ಮೂಲ ಮಹಾಭಾರತ (೮.೧೭.೭೭)

4.ಶತಪಥ ಬ್ರಾಹ್ಮಣ (೧೧.೭.೧.೩)

೨. ಹೌದು ಸೆನ್ಸಿಬಲ್ ಆದ ವಿಚಾರವೇ ಏಕೆಂದರೆ, ಮಹಾಭಾರತ ಯುದ್ಧಕಾಲಾನಂತರ, ಜೈನರ ಮೇಲುಗೈ ಆಯಿತು. ಅದು ಅಹಿಂಸೆಯ ಧ್ಯೇಯವನ್ನು ಪಾಲಿಸಿತು. ಅದಾಗಲೇ ಬೇಸಾಯದ ಉನ್ನತಿಯಾಗಿ ಹಲವಾರು ಧಾನ್ಯ ಬೆಳೆಯಲು ಪ್ರಾರಂಭಿಸಿದರು, ಬ್ರಾಹ್ಮಣ ವರ್ಗ ಮುಖ್ಯವಾಗಿ ಮಾಂಸ ಭಕ್ಷಣೆಯನ್ನು ಕ್ರಮೇಣ ಬಿಡಲಾರಂಭಿಸಿತು. ಇದನ್ನು ಮಾನವನ ಪ್ರಗತಿ ಎನ್ನಬಹುದು ಮತ್ತು ತನ್ನ ಪಾವಿತ್ರ್ಯವನ್ನು ತೋರಿಸುವ ಅಸೆ ಎನ್ನಬಹುದು. ಆ ಕಾಲಘಟ್ಟದಿಂದ ಗೋವು ಭಾರತದ ಜನರ ಸಂಪತ್ತಾಗಿ ಮಾರ್ಪಾಡಾಯಿತು. ನಮ್ಮ ದೈನಂದಿನ ಎಲ್ಲಾ ಕಾರ್ಯಕ್ಕೂ ನಮ್ಮ ಜೀವನ ಪದ್ಧತಿ ಅದರ ಮೇಲೆ ಅವಲಂಬಿತವಾಯಿತು, ಹಾಲು, ತುಪ್ಪ, ಬೆಣ್ಣೆ, ಬೇಸಾಯ ಇನ್ನಿತರ ಎಲ್ಲಾ ರೀತಿಯಿಂದಲೂ ಹಸು ಎಂಬುದು ಮನೆಯೊಂದರ ಅವಿಭಾಜ್ಯ ಅಂಗವಾಗತೊಡಗಿತು. ಇನ್ನಾವ ದೇಶದಲ್ಲೂ ಈ ರೀತಿಯಾಗಿ ಹಸುವಿನ ಮೇಲೆ ಅವಲಂಬನೆಯಾದ ನಾಗರೀಕತೆ ಬೆಳೆಯಲಿಲ್ಲ. ಕುರಿಯಿಂದ, ಕೋಳಿಯಿಂದ, ಆಡಿನಿಂದ, ಮಾಂಸ ಮತ್ತು ಚರ್ಮ ಬಿಟ್ಟು ಇನ್ನೇನು ಆಗಬೇಕಿರಲಿಲ್ಲ. ಮನೆಯ ಸದಸ್ಯನಂತಾದ ಹಸುವನ್ನು ಭಾರತೀಯರು ಸಹಜವಾಗಿ ದೈವೀ ಪಟ್ಟವನ್ನು ನೀಡಿದರು. ಯಾವುದಕ್ಕೆ ದೈವ ರೂಪವನ್ನು ನೀಡುತ್ತಾರೋ ಆಗ ಅದರ ರಕ್ಷಣೆ ನಮ್ಮದು ಎಂಬ ಆಪ್ತ ಭಾವ ಹೊಮ್ಮುವುದು ಸಹಜ ಮತ್ತು ಸತ್ಯ. ಮನೆಯವರು ಅತಿಯಾಗಿ ಪ್ರೀತಿಸುವ ನಾಯಿಗೆ ಯಾರದರೂ ಕಲ್ಲು ಹೊಡೆದರೆ ಜನ ಸಹಿಸರು, ಅಂಥದ್ದರಲ್ಲಿ ಶತಮಾನಗಳಿಂದ ಯಾವ ಪ್ರಾಣಿಯೊಂದಿಗೆ ಭಾರತೀಯ ತನ್ನ ಆಳವಾದ ಭಾವನೆಯನ್ನು ರೂಢಿಸಿಕೊಂಡಿದ್ದಾನೋ ಅದನ್ನು ಹಾಳು ಮಾಡುವ ಕೃತ್ಯವನ್ನು ಅವನು ಸಹಿಸಲಾರ. ಮೇಕೆ ಇಲ್ಲದಿದ್ದರೆ, ಕೋಳಿ ಇಲ್ಲದಿದದ್ದರೆ, ಮೀನು ಇಲ್ಲದಿದ್ದರೆ ಕೂಡ ಭಾರತೀಯ ಬಾಳಬಲ್ಲ, ಆದರೆ ಹಸುವಿಲ್ಲದೇ ಬದುಕಲಾರೆವು ಎಂಬ ಮಟ್ಟಕ್ಕೆ ಭಾರತೀಯ ಅದರೊಡನೆ ಆಪ್ತ ಭಾವ ಹೊಂದಿದ್ದಾನೆ, ಅವಲಂಬಿತನಾಗಿದ್ದಾನೆ. ಅದೇ ರೀತಿಯಾಗಿ ಅವನ ಜೀವನ ಶೈಲಿಯಿದೆ. ಇದು ತರ್ಕಕ್ಕಿಂತ ಭಾರತೀಯರ ಆಪ್ತತೆಗೆ ಸಂಬಂಧಪಟ್ಟ ವಿಚಾರ. ಮೃಗೀಯ ಗುಣದಿಂದ ಮಾನವನು ಪ್ರಗತಿಯನ್ನು ಹೊಂದಬೇಕು. ಮಾಂಸಹಾರ ಬೇಕೋ ಬೇಡವೋ ಎಂಬುದು ಅವರವರ ಜಿಹ್ವಾ ಚಪಲಕ್ಕೆ, ಅವರವರ ತೀಟೆಗೆ ಸಂಬಂಧಪಟ್ಟಿದ್ದು. ಆದರೆ ಈ ನೆಲದಲ್ಲಿ ಗೋ ಮಾಂಸ ಭಕ್ಷಣೆ ತಪ್ಪು. ಬೇರೆ ನೆಲದಲ್ಲಿ ಈ ವಾದಕ್ಕೆ ಅರ್ಥವಿಲ್ಲದಿರಬಹುದು, ಆದರೆ ಇಲ್ಲಿದೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ತಾಳ್ಮೆ ಬೇಕು. ಶತಮಾನಗಳ ಹಿಂದಿನದನ್ನು ಎತ್ತಿ ಆಡುವುದಕ್ಕೂ ಮುನ್ನ ಈ ರೀತಿ ಎತ್ತಾಡುವವರ ಮೂಲ ಪುರುಷರು, ಅವರ ಮತಗಳವರು, ಅವರ ಜನಾಂಗದವರು ಯಾವ ಯಾವ ಮಾಂಸ ತಿಂದು ಸತ್ತರು, ಎಂಥಹ ಪೈಶಾಚಿಕರು, ಎಂಥಹ ಮೃಗೀಯರು, ಎಂಥಹ ಅನಾಗರೀಕ ಜೀವಿಗಳಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ.

One clap, two clap, three clap, forty?

By clapping more or less, you can signal to us which stories really stand out.