ಕನಸುಗಳ ಬೆನ್ನತ್ತಿ ನಿಶಾಚರಿ…

ಒಂದೇ ಸಮನೆ ಸುರಿಯುತಿಹ ಸೋನೆ ಮಳೆಯ ರಾತ್ರಿ.

ಭವಿಷ್ಯದ ಭರವಸೆ ಇಲ್ಲದ ಕನಸುಗಳ ನೆನೆದು ನಿದ್ದೆ ಹತ್ತಿರ ಸುಳಿಯದ ರಾತ್ರಿ.

ಛಾವಣಿಯಿಂದ ಟಪ್ ಟಪ್ ಎಂದು ಸದ್ದು ಮಾಡಿ ಬೀಳುತಿಹ ಹನಿಗಳು,

ಮಳೆಯ ಜೋಗುಳಕೆ ತಾಳ ಹಾಕುತ್ತಿರುವಂತೆ ಭಾಸವಾಗುತ್ತಿದೆ.

ಬೀದಿದೀಪದ ಬೆಳಕು ಪರದೆಯ ಸಂದಿಯಿಂದ ಕೋಣೆಯೊಳಗೆ ನುಸುಳಿದೆ,

ಇಳಿಗಾಳಿಗೆ ತೂಗುತ್ತಿರುವ ಮರದ ರೆಂಬೆಯ ನೆರಳೇಕೊ ಸೆಳೆಯುತ್ತಿದೆ.

ಜೀರುಂಡೆಯ ಕೂಗಿನ ನಡುವೆಯ ನಿಶ್ಶಬ್ಧವನ್ನು ಮನ ಅರಸುತ್ತಿದೆ.

ನಾಳೆಯ ಹೊಂಗಿರಣವು ಹೊಸ ಕನಸು ತಂದು ನನ್ನ ಮಡಿಲಲ್ಲಿ ಹಾಕುವ ತಯಾರಿಯಲ್ಲಿದೆ.

ಹೊಸ ದಿನದ ನವೀನತೆ ನನ್ನ ಕೆಲವು ಕನಸುಗಳ ಸಾಕಾರಕ್ಕೆ ನೆರವಾಗುದೆಂಬ ಹಂಬಲದಿ…

ಇಂತಿ ಮಿತ್ರಾ.

Show your support

Clapping shows how much you appreciated Vibha Ravindra’s story.