Sanjay Hoysala
Nov 8 · 1 min read

ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ ಮತ್ತಿತರ ಕಾರಣಗಳಿಂದ 2009ರ ಹೊತ್ತಿಗೆ ಒಂದು ಹುಲಿಯೂ ಇಲ್ಲದಂತಾಗಿದ್ದವಂತೆ. ನಂತರ ಅಲ್ಲಿನ ಅರಣ್ಯ ಇಲಾಖೆಯವರ ಇಚ್ಚಾಸಕ್ತಿ, ಶ್ರಮದ ಪರಿಣಾಮವಾಗಿ ಬೇರೆ ಅರಣ್ಯ ಪ್ರದೇಶದಿಂದ ಹುಲಿಗಳನ್ನು ತಂದು ಇಲ್ಲಿಗೆ ಪುನರ್ ಪರಿಚಯ ಕಾರ್ಯಕ್ರಮದ (Reintroduction programme) ಪಲವಾಗಿ, ಅಲ್ಲಿ ಇಂದು 54 ಕ್ಕೂ ಅಧಿಕ ಹುಲಿಗಳಿವೆ.
ಇದೇ ರೀತಿ ರಾಜಸ್ಥಾನದ ಸಾರಿಸ್ಕ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಕೂಡ ಈ ಹಿಂದೆ ಪೂರ್ತಿಯಾಗಿ ಹುಲಿಗಳ ಸಂಖ್ಯೆ ನಶಿಸಿದಾಗ, ಮೂಲತಃ ಕರ್ನಾಟಕದ ಅರಣ್ಯಾಧಿಕಾರಿಗಳಾದ ಸೋಮಶೇಖರ್ ಸರ್ ರವರ ನೇತೃತ್ವದಲ್ಲಿ ಭಾರತದಲ್ಲಿ ಮೊದಲ ಭಾರಿಗೆ ಹುಲಿಗಳ ಪುನರ್ ಪರಿಚಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಭಾರತದ‌ ವನ್ಯಜೀವಿಗಳ ಸಂರಕ್ಷಣೆಯ ಇತಹಾಸದಲ್ಲಿ‌ ಇವೆರಡು ಪ್ರಯೋಗಗಳು ಅತ್ಯದ್ಭುತವಾದವುಗಳು. ಈ ಪ್ರಯೋಗಗಳ ಸ್ಪೂರ್ತಿಯು ನಮ್ಮ ಭಾರತದಲ್ಲಿ‌ಈಗಾಗಲೇ ತೀರಾ ಅಳಿವಿನಂಚಿನಲ್ಲಿರುವ ರೆಡ್ ಪಾಂಡಾ, ಏಷ್ಯಾಟಿಕ್ ಸಿಂಹ, ಘೆಂಡಾಮೃಗ, ಕಾಡುಪಾಪ, ಸಿಂಹಮುಖದ ಸಿಂಗಳಿಕ, ಕೃಷ್ಣಮೃಗ, ಹೆಬ್ಬಾಕ ( great Indian bustard) , ಮಂಗಟ್ಟೆ (Great Indian hornbill) ಮುಂತಾದ ವನ್ಯಜೀವಿಗಳ ಸಂರಕ್ಷಣೆಗೆ ಪ್ರೇರಣೆಯಾಗಲೀ, ಆ ಮೂಲಕ ಭಾರತದಲ್ಲಿ ಈಗಿರುವ ಜೀವವೈವಿಧ್ಯತೆ ಮತ್ತಷ್ಟು ಸಮೃದ್ದವಾಗಲಿ.

- ಸಂಜಯ್ ಹೊಯ್ಸಳ

#Wildlife #Biodiversity #Tigers #ವನ್ಯಜೀವಿಗಳು #ಜೀವವೈವಿಧ್ಯ #ಹುಲಿಗಳು

    Sanjay Hoysala

    Written by

    Welcome to a place where words matter. On Medium, smart voices and original ideas take center stage - with no ads in sight. Watch
    Follow all the topics you care about, and we’ll deliver the best stories for you to your homepage and inbox. Explore
    Get unlimited access to the best stories on Medium — and support writers while you’re at it. Just $5/month. Upgrade