ಪೆಟ್ಯಾ: ಹಿಂದೆಂದಿಗಿಂತಲೂ ಅತಿದೊಡ್ಡ ಸೈಬರ್ ದಾಳಿ; ರಾನ್ಸಮ್​ವೇರ್ ಗಿಂತ ಹೆಚ್ಚು ಅಪಾಯಕಾರಿ!

ನವದೆಹಲಿ: ಪೆಟ್ಯಾ ಸೈಬರ್ ದಾಳಿ ಇತಿಹಾಸದಲ್ಲೇ ಅತೀ ದೊಡ್ಡ ಸೈಬರ್ ದಾಳಿ ಎಂದು ಹೇಳಲಾಗುತ್ತಿದ್ದು, ಜಗತ್ತಿನಾದ್ಯಂತ ಬರೊಬ್ಬರಿ 150ಕ್ಕೂ ಹೆಚ್ಚು ದೇಶಗಳ ಮೇಲೆ ವೈರಸ್ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ.ಉಕ್ರೇನ್ ನಲ್ಲಿ ಮೊದಲ ದಾಳಿ ಮಾಡಿದ ಪೆಟ್ಯಾ, ಬಳಿಕ ಬಹುತೇಕ ಯೂರೋಪಿಯನ್ ದೇಶಗಳ ಕಂಪ್ಯೂಟರ್ ಗಳನ್ನು ಆಕ್ರಮಿಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಪೆಟ್ಯಾ ಇದೀಗ ಆಸ್ಟ್ರೇಲಿಯಾಗೂ ಪಸರಿಸಿದೆ ಎಂದು ಹೇಳಲಾಗುತ್ತಿದ್ದು, ಆಸ್ಟ್ರೇಲಿಯಾದ ಗ್ಲೋಬಲ್ ಲಾ ಸಂಸ್ಥೆ ಡಿಎಲ್ ಎ ಪೈಪರ್ ಲಿಮಿಟೆಡ್ ಕೂಡ ಸೈಬರ್ ದಾಳಿಗೊಳಗಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ ಹೋಬರ್ಟ್ ನಲ್ಲಿರುವ ಖ್ಯಾತ ಚಾಕೊಲೇಟ್ ತಯಾರಿಕಾ ಸಂಸ್ಥೆ ಕ್ಯಾಡ್ಬರಿ ಕಚೇರಿ ಕಂಪ್ಯೂಟರ್ ಗಳ ಮೇಲೂ ಪೆಟ್ಯಾ ದಾಳಿ ಮಾಡಿದೆ. ಹೀಗಾಗಿ ಸಂಸ್ಥೆ ತನ್ನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.ಇನ್ನುಳಿದಂತೆ ಬ್ರಿಟನ್​, ನೆದರ್​​ ಲ್ಯಾಂಡ್​, ಸ್ಪೇನ್​ ಅಮೆರಿಕವೂ ಪೆಟ್ಯಾ ರಾನ್ಸಮ್​ವೇರ್ ಕಾಟಕ್ಕೆ ತುತ್ತಾಗಿದೆ.ಅತೀ ದೊಡ್ಡ ಹಾಗೂ ಅತೀ ಹೆಚ್ಚು ಅಪಾಯಕಾರಿ ವೈರಸ್ಇನ್ನು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿರುವಂತೆ ಪ್ರಸ್ತುತ ದಾಳಿ ಮಾಡಿರುವ ಪೆಟ್ಯಾ ವೈರಸ್ ದಾಳಿ ಅತೀ ದೊಡ್ಡ ಮಟ್ಟದ ವೈರಸ್ ದಾಳಿಯಾಗಿದ್ದು, ಜಗತ್ತಿನ ಸುಮಾರು 150ಕ್ಕೂ ಹೆಚ್ಚು ದೇಶಗಳ ಮೇಲೆ ದಾಳಿ ಮಾಡಿದೆ. ಅಂತೆಯೇ ಈ ಹಿಂದೆ ದಾಳಿ ಮಾಡಿದ್ದ ವನ್ನಾಕ್ರೈ ವೈರಸ್ ಗಿಂತಲೂ ಪೆಟ್ಯಾ ಅತ್ಯಂತ ಹೆಚ್ಚು ಅಪಾಯಕಾರಿ ವೈರಸ್ ಆಗಿದೆ ಎಂದು ತಜ್ಞರು ಹೇಳಿದ್ದಾರೆ. ‘ಪೆಟ್ಯಾ ರಾನ್ಸಮ್​ವೇರ್ ಮಾಲ್ವೇರ್​ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು, ಇದು ಈ ಮೊದಲು ದಾಳಿ ನಡೆಸಿದ್ದ ರಾನ್ಸಮ್ ವೇರ್​ಗಿಂತಲೂ ವೇಗವಾಗಿ ಕಂಪ್ಯೂಟರ್ ಗಳನ್ನು ಹ್ಯಾಕ್​ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದೆ ರಾನ್ಸಮ್​ವೇರ್ ದಾಳಿಯನ್ನ ತಡೆಯಲು ಕಿಲ್​ ಸ್ವಿಚ್ ತಂತ್ರಜ್ಞಾನ ಬಳಸಲಾಗಿತ್ತು. ಆದ್ರೆ ಪೆಟ್ಯಾ ರಾನ್ಸಮ್​ವೇರ್​ಅನ್ನು ‘ಕಿಲ್​ ಸ್ವಿಚ್​’ ನಿಂದಲೂ ತಡೆಯಲು ಸಾಧ್ಯವಿಲ್ಲ ತಜ್ಞರು ಹೇಳುತ್ತಿದ್ದಾರೆ.

One clap, two clap, three clap, forty?

By clapping more or less, you can signal to us which stories really stand out.