
ಕನಸುಗಳ ಬೆನ್ನತ್ತಿ ನಿಶಾಚರಿ…
Jul 28, 2017 · 1 min read
ಈ ಬಿಸಿ ಬೇಗೆಯಲ್ಲಿ ತಂಗಾಳಿ ಮೈ ಸವರಿತ್ತು
ತಲೆ ಎತ್ತಿ ನೋಡಿದೆ, ಕಂಡದ್ದು ಕಪ್ಪು ಮೋಡವಂದು
ಮಳೆಯ ಸುಳಿವು, ಕಾದು ಕುಳಿತೆ
ಮೊದಲ ಹನಿ ನನ್ನ ಸ್ಪರ್ಷಿಸಲೆಂದು,
ಧೋ ಎಂದು ಸುರಿಯಿತು ಮಳೆ
ನನ್ನ ಬಿಟ್ಟು ಇನ್ನೆಲ್ಲರನ್ನು ತೋಯಿಸಿತು,
ನಾನಲ್ಲೆ ಕುಳಿತೆ,
ಕೊನೆ ಹನಿಯಾದರೂ ನನ್ನ ತಲುಪುವುದೆಂದು ಕಾಯುತ್ತ…
