ವಂಚನೆಸಿಮ್ ಸ್ವ್ಯಾಪ್ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

Shruti Bhatt
PhonePe
Published in
2 min readAug 30, 2019

ಬ್ಯಾಂಕ್ ಪ್ರತಿನಿಧಿಗಳು ಎಂದು ಹೇಳಿಕೊಂಡು ಬರುವ ಅನಾಮದೇಯ ಫೋನ್ ಕರೆಗಳು. ನೀವು ಸ್ವೀಕರಿಸಿದ ಒಟಿಪಿ ಬೇಕೆಂದು ಕೇಳಿ ಬರುವ ಎಸ್‌ಎಂಎಸ್ ಸಂದೇಶಗಳು. ವಂಚಕರು ನಿಮ್ಮ ಹಣಕ್ಕೆ ಕನ್ನ ಹಾಕಲು ಇಂತಹ ಅನೇಕ ಮಾರ್ಗಗಳನ್ನು ನಿರಂತರವಾಗಿ ಹುಡುಕುತ್ತಿರುತ್ತಾರೆ.

ನೀವು ವಂಚಕರ ಇಂತಹ ಪ್ರಯತ್ನಗಳ ಕುರಿತು ಎಚ್ಚರದಿಂದ ಇದ್ದಲ್ಲಿ, ಆಗ ಯಾವುದೇ ಇಂತಹ ಪ್ರಯತ್ನಗಳು ನಡೆದಾಗ ಅವುಗಳನ್ನು ಗುರುತಿಸುವುದು ಮತ್ತು ತಡೆಯುವುದು ಸುಲಭವಾಗುತ್ತದೆ.

ವಂಚನೆ ಮತ್ತು ಗ್ರಾಹಕ ಸುರಕ್ಷೆಯ ಕುರಿತಂತೆ ನಾವು ನೀಡುತ್ತಿರುವ ಸರಣಿ ಬ್ಲಾಗ್ ಬರಹಗಳ ಭಾಗವಾಗಿ ಅನೇಕ ಪ್ರಕಾರದ ವಂಚನೆಗಳು ಮತ್ತು ಸ್ಕ್ಯಾಮ್‌‌ಗಳ ಕುರಿತು ಬರೆಯಲಾರಂಭಿಸಿದ್ದೇವೆ. ಸಿಮ್ ಸ್ವ್ಯಾಪ್ ವಂಚನೆ ಕುರಿತು ಇಲ್ಲಿ ತಿಳಿದುಕೊಳ್ಳಿ.

ಸಿಮ್ ಸ್ವ್ಯಾಪ್ ವಂಚನೆ ಎಂದರೇನು?

ಸಿಮ್ ಸ್ವ್ಯಾಪ್ ವಂಚನೆಯಲ್ಲಿ ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿ ನಿಮ್ಮ ಫೋನ್ ನಂಬರ್‌‌ಗೆ ಹೊಸ ಸಿಮ್ ಕೊಳ್ಳುತ್ತಾರೆ. ಹಾಗೆ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಒಟಿಪಿಗಳನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

ಪ್ರಮುಖ ಸೂಚನೆ: PhonePe ಯಾವತ್ತೂ ನಿಮ್ಮ ವೈಯಕ್ತಿಕ ವಿವರಗಳಿಗಾಗಿ ಕೇಳುವುದಿಲ್ಲ. Phonepe.com ಡೊಮೇನ್ ಹೊರತುಪಡಿಸಿ PhonePe ಹೆಸರಿನಲ್ಲಿ ಬರುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ಒಂದು ವೇಳೆ ಇದು ವಂಚಕರಿಂದ ಬಂದದ್ದು ಎಂದು ಅನುಮಾನ ಬಂದಲ್ಲಿ, ದಯವಿಟ್ಟು ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ.

ಸಿಮ್ ಸ್ವ್ಯಾಪ್ ವಂಚನೆ ಹೇಗೆ ನಡೆಯುತ್ತದೆ?

  1. ವಂಚಕರು ನಿಮ್ಮ ಮೊಬೈಲ್ ಆಪರೇಟರ್ ಬೆಂಬಲ ಪ್ರತಿನಿಧಿಗಳು ಎಂದು ಹೇಳಿಕೊಂಡು ನಿಮಗೆ ಕರೆ ಮಾಡುತ್ತಾರೆ. ನಿಮ್ಮ ನೆಟ್‌ವರ್ಕ್ ಅಪ್‌ಗ್ರೇಡ್ ಮಾಡುವ ಉದ್ದೇಶದಿಂದ ನಿಮ್ಮ ಮೊಬೈಲ್‌ಗೆ ಕಳಿಸಲಾದ SMS ಫಾರ್ವರ್ಡ್ ಮಾಡಲು ಕೇಳಿಕೊಳ್ಳುತ್ತಾರೆ. ಆ SMS ನಲ್ಲಿ ನಿಮ್ಮ ಹೆಸರಿನಲ್ಲಿ ಖರೀದಿಸಲಾದ ಹೊಸ ಸಿಮ್‌ ಕಾರ್ಡಿನ 20 ಅಂಕಿಗಳ ಸಂಖ್ಯೆಯಿರುತ್ತದೆ. ಜೊತೆಗೆ ಅವರು ನಿಮ್ಮ ಗುಪ್ತ ಬ್ಯಾಂಕ್ ವಿವರಗಳನ್ನು ಕೂಡಾ ಕೇಳುತ್ತಾರೆ.
  2. ಆ ಎಸ್‌ಎಂಎಸ್ ನಿಮ್ಮ ಬಳಿಯಿರುವ ಸಿಮ್ ಕಾರ್ಡನ್ನು ಡೀಆ್ಯಕ್ಟಿವೇಟ್ ಮಾಡಿ ಅವರು ಕಾನೂನುಬಾಹೀರವಾಗಿ ಕೊಂಡಿರುವ ಡೂಪ್ಲಿಕೇಟ್ ಸಿಮ್ ಅನ್ನು ಆ್ಯಕ್ಟಿವೇಟ್ ಮಾಡುತ್ತದೆ. ನಿಮ್ಮ ಸಿಮ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಮತ್ತು ನೀವು ಎಲ್ಲಾ ಸಂಪರ್ಕವನ್ನು ಕಳೆದುಕೊಳ್ಳುತ್ತೀರಿ.
  3. ವಂಚಕರಿಗೆ ಈಗ ನಿಮ್ಮ ಫೋನ್ ನಂಬರ್ ಸಿಕ್ಕಿರುವುದರಿಂದಾಗಿ ನಿಮ್ಮ ಬ್ಯಾಂಕ್ ವಿವರಗಳನ್ನು ಬಳಸಿ ಹಣ ಕಳಿಸುವುದನ್ನು ಮಾಡುವುದು ಸುಲಭವಾಗಿರುತ್ತದೆ.
  4. ನಿಮ್ಮ ಬ್ಯಾಂಕ್ ಹಣವನ್ನು ತಮ್ಮ ಖಾತೆಗೆ ಕಳಿಸಲು ಅಗತ್ಯವಾದ ಒಟಿಪಿ ಈಗ ಅವರ ಬಳಿಯಿರುವ ಸಿಮ್‍‌ಗೆ ಹೋಗುವುದರಿಂದಾಗಿ ಇದು ಬಹಳ ಸುಲಭ.

ಒಂದು ವೇಳೆ ನಿಮ್ಮ ಮೊಬೈಲ್ ಕನೆಕ್ಟಿವಿಟಿಯಲ್ಲಿ ದೀರ್ಘಕಾಲದವರೆಗೆ ಅಡೆತಡೆ ಉಂಟಾದಲ್ಲಿ, ಇದು ಕೂಡಾ ಯಾವುದೋ ವಂಚನೆಯ ಕುರುಹಾಗಿರಬಹುದು. ಹಾಗಾಗಿ ಅಂತಹ ಸಂದರ್ಭದಲ್ಲಿ ತಕ್ಷಣ ನಿಮ್ಮ ಮೊಬೈಲ್ ಆಪರೇಟರ್‌ರನ್ನು ಸಂಪರ್ಕಿಸಿ.

(ನಿಮ್ಮ ಫೋನ್ ಇದ್ದಕ್ಕಿದ್ದಂತೆ ಸಂಪರ್ಕವನ್ನು ಕಳೆದುಕೊಂಡರೆ, ನಿಮ್ಮ ಮೊಬೈಲ್ ಆಪರೇಟರ್ ಅನ್ನು ಸಂಪರ್ಕಿಸಿ.)

ನಿಮ್ಮ ಸುರಕ್ಷೆಗೆ ಅಗತ್ಯ ಸೂಚನೆಗಳು:

  • ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು (ಕಾರ್ಡ್ ಸಂಖ್ಯೆ, ಅವಧಿ ಮುಕ್ತಾಯ ದಿನಾಂಕ, ಪಿನ್) ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಬ್ಯಾಂಕ್ ಅಥವಾ ಮೊಬೈಲ್ ಆಪರೇಟರ್ ಹೆಸರಿನಲ್ಲಿ ಇಮೇಲ್ ಅಥವಾ SMS ಬಂದಾಗ, ಅವುಗಳು ಅಧಿಕೃತ SMS ಹ್ಯಾಂಡಲ್/ಇಮೇಲ್ ವಿಳಾಸಗಳಿಂದ ಬಂದಿವೆಯೇ ಎಂಬುದನ್ನು ದೃಢೀಕರಿಸಿಕೊಳ್ಳಿ.
  • SMS ಅಥವಾ ಇನ್ಯಾವುದೇ ಪ್ರಕಾರದಲ್ಲಿ ನಿಮಗೆ ಬರುವ ಒಟಿಪಿಗಳು, ಪಿನ್ ನಂಬರ್‌ಗಳು ಅಥವಾ ಬೇರೆ ಯಾವುದೇ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
  • ನಿಮ್ಮ ಖಾತೆಯಿಂದ ಮಾಡಿದ ವ್ಯವಹಾರಗಳನ್ನು ಟ್ರ್ಯಾಕ್ ಮಾಡಲು ಇಮೇಲ್ ಮತ್ತು SMS ಸೂಚನೆಗಳಿಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ.
  • ನಿಮ್ಮ ಬ್ಯಾಂಕ್ ವಹಿವಾಟು ಇತಿಹಾಸಗಳನ್ನು ಆಗಾಗ ಪರಿಶೀಲಿಸುತ್ತಿರಿ ಮತ್ತು ಯಾವುದೇ ಅಕ್ರಮಗಳು ನಡೆಯುತ್ತಿವೆಯೇ ಎಂಬುದನ್ನು ಗಮನಿಸುತ್ತಿರಿ.

ಈ ಸರಣಿಯ ಮುಂದಿನ ಲೇಖನ ಶೀಘ್ರ ಬರಲಿದೆ!

--

--