ಹಣ ದ್ವಿಗುಣಗೊಳಿಸುವ ಮೋಸದ ಬಗ್ಗೆ ಕೇಳಿದ್ದೀರಾ?

johncy John
PhonePe
Published in
2 min readJul 28, 2022

ನೀವು ಸುರಕ್ಷಿತವಾಗಿರಲು ತಿಳಿಯಬೇಕಾದ ಅಂಶಗಳು ಇಲ್ಲಿವೆ

ವಂಚಕರು ಇಂದು ಜನರಿಂದ ಹಣವನ್ನು ವಂಚನೆಯ ಮೂಲಕ ಪಡೆಯಲು ಹೊಸ ಹೊಸ ಮಾರ್ಗಗಳನ್ನು ಬಳಸುತ್ತಾರೆ. ಅವರು ಎಚ್ಚರಿಕೆಯಿಂದ ಕಾನೂನುಬದ್ಧವಾಗಿ ತೋರುವ ಒಂದು ತಂತ್ರವನ್ನು ರೂಪಿಸುತ್ತಾರೆ ಮತ್ತು ಅಂತಿಮವಾಗಿ ಮುಗ್ಧ ಜನರನ್ನು ವಂಚಿಸುತ್ತಾರೆ. ರಾತ್ರೋರಾತ್ರಿ ಹಣವನ್ನು ದ್ವಿಗುಣಗೊಳಿಸುವ ಭರವಸೆಯೊಂದಿಗೆ ಜನರನ್ನು ಪ್ರಚೋದಿಸುವುದು ವಂಚಕರು ಬಳಸುವ ತಂತ್ರಗಳಲ್ಲಿ ಒಂದಾಗಿದೆ.

ಹಣ ದ್ವಿಗುಣಗೊಳಿಸುವ ಮೋಸವನ್ನು ಹೇಗೆ ಮಾಡಲಾಗುತ್ತದೆ

ಘಟನೆ 1:

ತಾನು ಯಾವುದೋ ಹಣಕಾಸಿನ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಮೋಸಗಾರರು ನಿಮ್ಮನ್ನು ಸಂಪರ್ಕಿಸುತ್ತಾರೆ. ಕಡಿಮೆ ಸಮಯದ ಅವಧಿಯಲ್ಲಿ ಸಣ್ಣ ಹೂಡಿಕೆಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ. ನಿಮ್ಮ ಹಣವು ದ್ವಿಗುಣ ಆಗಿ ಬೆಳೆಯಬಹುದು ಎಂಬ ತಪ್ಪು ನಂಬಿಕೆಯನ್ನು ಹುಟ್ಟಿಸಲು, ಅವರು ನಿಮಗೆ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವಂತೆ ಹೇಳಿ, ಕಡಿಮೆ ಸಮಯದಲ್ಲಿ ಡಬಲ್‌ ಹಣವನ್ನು ನೀಡುತ್ತಾರೆ. ಇದರ ಮೂಲಕ ನಿಮ್ಮ ವಿಶ್ವಾಸವನ್ನು ಗಳಿಸಿದ ನಂತರ, ಅವರು ನಿಮ್ಮಿಂದ ದೊಡ್ಡ ಪ್ರಮಾಣದ ಹಣವನ್ನು ಲೂಟಿ ಮಾಡುತ್ತಾರೆ.

ಘಟನೆ 2:

ನಿಮ್ಮ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಳಕೆ ಅಥವಾ ಹೆಚ್ಚಿನ ಉಳಿತಾಯ ಬ್ಯಾಂಕ್ ಬ್ಯಾಲೆನ್ಸ್‌ನ ಆಧಾರದ ಮೇಲೆ ನೀವು ಆಕರ್ಷಕ ಕೊಡುಗೆಯನ್ನು ಗೆದ್ದಿದ್ದೀರಿ ಮತ್ತು ನಿಮ್ಮ ಹಣವನ್ನು ಕಡಿಮೆ ಅವಧಿಯಲ್ಲಿ ದ್ವಿಗುಣಗೊಳಿಸಲು ಸೀಮಿತ ಅವಧಿಯ ಕೊಡುಗೆಯನ್ನು ನೀವು ಹೊಂದಿರುವಿರಿ ಎಂಬ ಸುಳ್ಳಿನೊಂದಿಗೆ SMS ಅಥವಾ Whatsapp ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಅವರು ನಿಮ್ಮ ಹಣವನ್ನು ಲೂಟಿ ಮಾಡಲು ಮಾತ್ರ ಹಣವನ್ನು ಠೇವಣಿ ಮಾಡಬೇಕಾದ ಲಿಂಕ್ ಅನ್ನು ಹಂಚಿಕೊಳ್ಳುತ್ತಾರೆ.

ಹಣ ದ್ವಿಗುಣಗೊಳಿಸುವ ಹಗರಣಗಳಿಂದ ನೀವು ಹೇಗೆ ಸುರಕ್ಷಿತವಾಗಿರಬಹುದು ಎಂಬುದು ಇಲ್ಲಿದೆ

1. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ: ಮೋಸ ಮಾಡುವವರು ಸಾಮಾನ್ಯವಾಗಿ ನಿಮಗೆ ಲಿಂಕ್ ಅನ್ನು ಕಳುಹಿಸುತ್ತಾರೆ, ಅದರ ಮೂಲಕ ನೀವು ರಿಟರ್ನ್ ಅಥವಾ ಗಿಫ್ಟ್‌ ಕಾರ್ಡ್ ಅನ್ನು ಸ್ವೀಕರಿಸುತ್ತೀರಿ ಎಂದು ಹೇಳುತ್ತಾರೆ. ಅಂತಹ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

2. ಕ್ರೆಡಿಟ್‌ ಕಾರ್ಡ್‌ ನಂಬರ್‌, CVV, PIN, OTP, ಮುಂತಾದ ವಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: Legitimate ಕಾನೂನುಬದ್ಧ ಸಂಸ್ಥೆಗಳು ವ್ಯವಹಾರಗಳಿಗೆ ಅಗತ್ಯವಿರುವ ವೈಯಕ್ತಿಕ ಮಾಹಿತಿಗಾಗಿ ನಿಮಗೆ ಕರೆ, ಇಮೇಲ್ ಅಥವಾ ಪಠ್ಯ ಸಂದೇಶವನ್ನು ಎಂದಿಗೂ ಕಳುಹಿಸುವುದಿಲ್ಲ. PhonePe ಪ್ರತಿನಿಧಿಯಂತೆ ಯಾರಾದರೂ ನಿಮ್ಮನ್ನು ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಹೇಳಿ. @phonepe.com ಡೊಮೇನ್‌ನಿಂದ ಬಂದ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.

3. ಸಂಪರ್ಕ ವಿವರವನ್ನು ಪಡೆಯಲು ಯಾವಾಗಲೂ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಉಪಯೋಗಿಸಿ: ಹಣಕಾಸು ಸಂಸ್ಥೆಯಿಂದ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನೀವು ಕರೆಯನ್ನು ಸ್ವೀಕರಿಸಿದರೆ ಮತ್ತು ಅದೇ ಸಂಖ್ಯೆಗೆ ಮರಳಿ ಕರೆ ಮಾಡಲು ಅವನು/ಅವಳು ಕೇಳಿದರೆ, ನೀವು ಮರಳಿ ಕರೆ ಮಾಡುವ ಮೊದಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿ.

4. PhonePe ನಲ್ಲಿ ಹಣವನ್ನು ಬೇರೆಯವರಿಂದ ಸ್ವೀಕರಿಸಲು ನೀವು ‘ಪಾವತಿ’ ಮಾಡಬೇಕಾಗಿಲ್ಲ ಅಥವಾ ನಿಮ್ಮ UPI ಪಿನ್ ಅನ್ನು ನಮೂದಿಸಬೇಕಾಗಿಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ.

5. ದಯವಿಟ್ಟು ನಿಮ್ಮ PhonePe ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಸಂದೇಶವನ್ನು ʼಪಾವತಿಸಿʼ ಒತ್ತುವ ಮೊದಲು ಅಥವಾ ನಿಮ್ಮ UPI ಪಿನ್ ನಮೂದಿಸುವ ಮೊದಲು ಎಚ್ಚರಿಕೆಯಿಂದ ಓದಿ.

6. Google, Twitter, FB ಇತ್ಯಾದಿಗಳಲ್ಲಿ PhonePe ಗ್ರಾಹಕ ಬೆಂಬಲ ಸಂಖ್ಯೆಗಳಿಗಾಗಿ ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ತಲುಪುವ ಏಕೈಕ ಅಧಿಕೃತ ಮಾರ್ಗವೆಂದರೆ https://www.phonepe.com/contact-us/

7. PhonePe ಬೆಂಬಲ ಎಂದು ಹೇಳಿಕೊಳ್ಳುವ ಅನಧಿಕೃತ ಮೊಬೈಲ್‌ ನಂಬರ್‌ ಗೆ ಎಂದಿಗೂ ಕರೆ ಮಾಡಬೇಡಿ ಅಥವಾ ಪ್ರತಿಕ್ರಿಯಿಸಬೇಡಿ.

ಮೋಸಗಾರರು ನಿಮ್ಮನ್ನು ಸಂಪರ್ಕಿಸಿದಾಗ ಏನು ಮಾಡಬೇಕು?

  • ತಕ್ಷಣವೇ ನಿಮ್ಮ ಹತ್ತಿರದ ಸೈಬರ್ ಅಪರಾಧ ಕೇಂದ್ರಕ್ಕೆ ಘಟನೆಯನ್ನು ವರದಿ ಮಾಡಿ ಮತ್ತು ಪೊಲೀಸರಿಗೆ ಸಂಬಂಧಿತ ವಿವರಗಳನ್ನು (ಫೋನ್ ಸಂಖ್ಯೆ, ವಹಿವಾಟಿನ ವಿವರಗಳು, ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಇತ್ಯಾದಿ) ಒದಗಿಸುವ FIR ಅನ್ನು ದಾಖಲಿಸಿ. ಪರ್ಯಾಯವಾಗಿ, ನೀವು ಈ ಲಿಂಕ್ ಅನ್ನು ಟ್ಯಾಪ್ ಮಾಡಬಹುದು -https://cybercrime.gov.in/ ಅಥವಾ ಆನ್‌ಲೈನ್‌ನಲ್ಲಿ ಸೈಬರ್ ದೂರನ್ನು ಸಲ್ಲಿಸಲು ಸೈಬರ್ ಸೆಲ್ ಪೊಲೀಸರನ್ನು 1930 ರಲ್ಲಿ ಸಂಪರ್ಕಿಸಿ.
  • ನಿಮ್ಮನ್ನು PhonePe ಮೂಲಕ ಸಂಪರ್ಕಿಸಿದರೆ, PhonePe ಅಪ್ಲಿಕೇಷನ್‌ ಗೆ ಲಾಗಿನ್‌ ಆಗಿ ಮತ್ತು‘ಸಹಾಯʼಕ್ಕೆ ಹೋಗಿ. ನೀವು ಮೋಸದ ಘಟನೆಯನ್ನು ‘ಖಾತೆ ಭದ್ರತೆ ಸಮಸ್ಯೆ/ ವಂಚನೆಯ ಚಟುವಟಿಕೆಯನ್ನು ವರದಿ ಮಾಡಿ.’ಅಡಿಯಲ್ಲಿ ದೂರು ಸಲ್ಲಿಸಬಹುದು. ಪರ್ಯಾಯವಾಗಿ ನೀವು support.phonepe.com.ಗೆ ಲಾಗಿನ್‌ ಆಗಬಹುದು.
  • ನಮ್ಮನ್ನು ನಮ್ಮ ಅಧಿಕೃತ ಅಕೌಂಟ್‌ಗಳಲ್ಲಿ ಮಾತ್ರ ಸಂಪರ್ಕಿಸಿ

Twitter: https://twitter.com/PhonePeSupport

ವೆಬ್: support.phonepe.com

--

--