ಹೊಳೆಯುವುದೆಲ್ಲಾ ಚಿನ್ನವಲ್ಲ

Shruti Bhatt
PhonePe
Published in
3 min readAug 30, 2019

ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯು BHIM UPI ಬಳಕೆದಾರರ ಕುರಿತಂತೆ ಫೆಬ್ರುವರಿ 2018 ರ ಸಂಖ್ಯೆಗಳನ್ನು ಪ್ರಕಟಿಸಿದ್ದು, ಸಂಖ್ಯೆಗಳು ಆಶಾದಾಯಕವಾಗಿವೆ. ಭಾರತದ ಅತಿದೊಡ್ಡ ನಾನ್-ಬ್ಯಾಂಕಿಂಗ್ BHIM UPI ಆ್ಯಪ್‌ ಆಗಿರುವ ನಾವು, BHIM UPI ಬೆಳವಣಿಗೆಯ ವೇಗದ ಬೆಳವಣಿಗೆಯ ಕುರಿತು ಅತ್ಯುತ್ಸಾಹಿಗಳಾಗಿದ್ದೇವೆ. ಕಳೆದ ಒಂದು ವರ್ಷದಲ್ಲಿ ಇದರ ಬೆಳವಣಿಗೆ ಎಲ್ಲರ ನಿರೀಕ್ಷೆಯನ್ನೂ ಮಿರಿಸಿದೆ.

ಅರ್ಥಾತ್, BHIM UPIನ ಈ ಉಲ್ಕೆಯಂತಹ ಬೆಳವಣಿಗೆ ಗ್ರಾಹಕರು, ಹೂಡಿಕೆದಾರರು, ಮಾಧ್ಯಮಗಳು ಮತ್ತು ಪಾವತಿ ಉದ್ಯಮಗಳನ್ನು ಸಮಾನವಾಗಿ ಸೆಳೆಯುತ್ತಿದೆ. ಇದ್ದಕ್ಕಿದ್ದಂತೆ ಎಲ್ಲರೂ BHIM UPIನಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿದ್ದಾರೆ.

ವಾಲೆಟ್‍ಗಳಿಗೆ BHIM UPI ಇಂಟರ್-ಆಪರೇಬಿಲಿಟಿ ಬೇಕು. ಬ್ಯಾಂಕುಗಳು ಹೊಸ ಯುಗದ ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲು ಬಯಸುತ್ತವೆ. ಗೂಗಲ್, ಅಮೆಜಾನ್ ಮತ್ತು ವ್ಯಾಟ್ಸಾಪ್‍ನಂತಹ ಜಾಗತಿಕ ದೈತ್ಯರು ಭಾರತದಲ್ಲಿ BHIM UPI ಆಧಾರಿತ ಪಾವತಿ ಸೇವೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಇದರಂತೆ ಭಾರತ ಸರಕಾರವೂ ಸಹ ಪಾವತಿಗಳ ಅಪ್ಲಿಕೇಶನ್ ಪ್ರಾರಂಭಿಸಿತು. ಭಾರತದಲ್ಲಿ BHIM UPI ಉತ್ತೇಜಿಸಿದ ನವೀನ ತಂತ್ರಜ್ಞಾನ ದೀರ್ಘಕಾಲದವರೆಗೆ ಉಳಿಯಲಿದ್ದು, ದೇಶ ಮತ್ತು ಜನತೆಗೆ ಒಳಿತು ಮಾಡಲಿದೆ. ಜೊತೆಗೆ, ಭಾರತದ ಗ್ರಾಹಕರಾಗಿ ಇದರ ಪ್ರಯೋಜನ ನಮಗೆಲ್ಲರಿಗೂ ಆಗಲಿದೆ.

ಆದಾಗ್ಯೂ, ನಮ್ಮ ಪ್ರಕಾರ ಇತ್ತೀಚಿನ ಮಾಧ್ಯಮ ನಿರೂಪಣೆಯು ಕೇವಲ BHIM UPI ವಹಿವಾಟು ಮೊತ್ತವನ್ನು ಮಾತ್ರ ಕೇಂದ್ರೀಕರಿಸಿದ್ದು, ಅದು ಸಂಕುಚಿತ ದೃಷ್ಟಿಯಾಗಿದೆ — ಇದು ಅರ್ಧದಷ್ಟು ಕಥೆಯನ್ನು ಮಾತ್ರ ಹೇಳುತ್ತದೆ. ಏಕೆಂದರೆ ವಹಿವಾಟು ಮೊತ್ತಗಳ ಜೊತೆ ಹೆಚ್ಚುವರಿಯಾಗಿ, BHIM UPIನ ಸಮತೋಲಿತ ಸ್ಕೋರ್ ಕಾರ್ಡ್‍ನಲ್ಲಿ ಒಟ್ಟು ವಹಿವಾಟುಗಳು, ಅನನ್ಯ ಗ್ರಾಹಕರ ಸಂಖ್ಯೆ ಮತ್ತು ಸರಾಸರಿ ವಹಿವಾಟು ಮೌಲ್ಯ (ATV) ಮತ್ತು ಗ್ರಾಹಕರ ಸರಾಸರಿ ವಹಿವಾಟು (ATPC) ನ ಕುರಿತಾದ ಅಂಕಿಸಂಖ್ಯೆಗಳನ್ನು ಕೂಡಾ ಒಳಗೊಂಡಿರಬೇಕು.

ಈ ರೀತಿಯಲ್ಲಿ ಲಭ್ಯವಿರುವ ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಒಟ್ಟಾರೆ ಸಂಖ್ಯೆಗಳನ್ನು ಪರಿಗಣಿಸಲಾಗುತ್ತದೆ.

ಸ್ಥೂಲವಾಗಿ ನೋಡಿದಾಗ, Paytm ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಮುನ್ನಡೆಯಲ್ಲಿದೆ ಎಂದು ತೋರುತ್ತದೆ. ಒಟ್ಟು ವ್ಯವಹಾರಗಳ 40% ಮಾರುಕಟ್ಟೆ ಪಾಲನ್ನು ಹೊಂದಿರುವುದು ಕಡಿಮೆ ಸಾಧನೆಯಲ್ಲ. ಆದರೆ ಅವರ ಇತರ ಅಂಕಿಸಂಖ್ಯೆಗಳು? ಈ ಡೇಟಾ ಸಾರ್ವಜನಿಕವಾಗಿ ಲಭ್ಯವಿಲ್ಲ.

ಅದೃಷ್ಟವಶಾತ್ ನಮಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ. Paytm ಮೂಲಕ ನಡೆಯುತ್ತಿರುವ ಒಟ್ಟು 68 ಮಿಲಿಯನ್ ವಹಿವಾಟುಗಳಲ್ಲಿ, 21 ಮಿಲಿಯನ್ ವಹಿವಾಟುಗಳು Paytm ಗ್ರಾಹಕರು PhonePe ಗ್ರಾಹಕರಿಗೆ (@YBL BHIM UPI ಐಡಿ ಬಳಸಿ) ಹಣ ಕಳಿಸುವ ವಹಿವಾಟುಗಳಾಗಿವೆ. ಆದ್ದರಿಂದ ನಾವು ಅವರ ATV, ATPC ಇತ್ಯಾದಿಗಳ ಕುರಿತು ಕೆಲವು ಉತ್ತರಗಳನ್ನು ಹುಡುಕಲು ನಿರ್ಧರಿಸಿದೆವು.

ನಾವು ಕಂಡುಕೊಂಡದ್ದು ಇಲ್ಲಿದೆ!

ವಿವರಿಸುವುದಾದರೆ, ಕೇವಲ 40,000 ಅನನ್ಯ ಗ್ರಾಹಕರು ಫೆಬ್ರುವರಿಯಲ್ಲಿ Paytm ನಲ್ಲಿ 500+ ವ್ಯವಹಾರಗಳನ್ನು ಮಾಡಿದ್ದಾರೆ.

ಅಂದರೆ, Paytm ನ ಸರಾಸರಿ ವಹಿವಾಟು ಮೌಲ್ಯವು 40 ರೂಪಾಯಿಗಿಂತ ಕಡಿಮೆಯಿದೆ.

ಇದಕ್ಕೆ ಹೋಲಿಸಿದರೆ, ಫೆಬ್ರವರಿಯಲ್ಲಿ PhonePe ನಲ್ಲಿ 6,000,000 ಅನನ್ಯ ಗ್ರಾಹಕರು ಪ್ರತಿಯೊಬ್ಬರು 5 ರಂತೆ ವ್ಯವಹಾರವನ್ನು ಮಾಡಿದ್ದಾರೆ.

ಅಂದರೆ, ನಮ್ಮ ಸರಾಸರಿ ವಹಿವಾಟು ಮೌಲ್ಯ 1,800 ರೂ.

ಈ ATV ಸಂಖ್ಯೆಗಳಲ್ಲಿರುವ ವ್ಯತ್ಯಾಸ (PhonePeಯಲ್ಲಿ ರೂ. 1,820 ಮತ್ತು Paytmನಲ್ಲಿ ರೂ.40) ಮತ್ತು Paytm ನ ಗಮನಾರ್ಹ ATPC ಸಂಖ್ಯೆ (525/ಬಳಕೆದಾರ/ತಿಂಗಳು) ಕುರಿತಂತೆ ತಾರ್ಕಿಕ ವಿವರಣೆಯನ್ನು ನೀಡುವುದಾದರೆ, Paytm ವಹಿವಾಟು ಸಂಖ್ಯೆಗಳು ಅದು ಪ್ರತಿ ವ್ಯವಹಾರಕ್ಕೆ ನೀಡಲ್ಪಡುವ ಗಮನಾರ್ಹ ಕ್ಯಾಶ್‍ಬ್ಯಾಕ್ ಕಾರಣದಿಂದ ಪ್ರಭಾವಿತಗೊಂಡಿವೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಈ ವಿವರಣೆಗಳಿಂದ ನಾವು ಮೂರು ತೀರ್ಮಾನಗಳಿಗೆ ಬರಬಹುದಾಗಿದೆ:

  1. Paytm ನಲ್ಲಿ ವಿಸ್ತಾರವಾದ BHIM UPI ಅಳವಡಿಕೆ ಇನ್ನೂ ಸಾಧ್ಯವಾಗಿಲ್ಲ: ಒಂದುವೇಳೆ 40,000 ಅನನ್ಯ ಗ್ರಾಹಕರು 21 ಮಿಲಿಯನ್ ವಹಿವಾಟುಗಳನ್ನು ಮಾಡುತ್ತಿದ್ದರೆ, ಇದರ ಬಹಿರ್ಗಣನೆ ಮಾಡಿದಾಗ, Paytm ನ ಒಟ್ಟು BHIM UPI ವಹಿವಾಟು ನಡೆಸುತ್ತಿರುವ ಗ್ರಾಹಕರ ಸಂಖ್ಯೆ 40,000 * 68/21 = 1.3 ಲಕ್ಷ ಆಗಿರುತ್ತದೆ.
  2. ಗ್ರಾಹಕರ ವಹಿವಾಟಿನ ಸಂಖ್ಯೆಗಳು ವಿಶಿಷ್ಟವಾದ BHIM UPI ಬಳಕೆಯ ಪ್ರಕರಣಗಳನ್ನು ಪ್ರತಿಬಿಂಬಿಸುವುದಿಲ್ಲ: ಸರಾಸರಿ PhonePe ಗ್ರಾಹಕರು ಪ್ರತಿ ತಿಂಗಳು 5 ವ್ಯವಹಾರಗಳನ್ನು ಮಾಡುತ್ತಾರೆ. ಆದೇ Paytm ನಲ್ಲಿ ನೋಡಿದರೆ 525 ವ್ಯವಹಾರಗಳ ಲೆಕ್ಕ ಬರುತ್ತದೆ. ಈ ಸಂಖ್ಯೆ BHIM UPI ನೆಟ್‍ವರ್ಕ್‍ನಲ್ಲಿ ಸಾಮಾನ್ಯ ಬಳಕೆದಾರರ ಬಳಕೆಯನ್ನು ಪ್ರತಿನಿಧಿಸುವುದಿಲ್ಲ.
  3. Paytm ವಹಿವಾಟುಗಳ ಸರಾಸರಿ ಮೌಲ್ಯ ಸರಾಸರಿಗಿಂತ ಕಡಿಮೆ: ಒಟ್ಟಾರೆ ನೆಟ್‍ವರ್ಕ್ ಮಟ್ಟದಲ್ಲಿ, BHIM UPI ನ ಒಟ್ಟಾರೆ ವಹಿವಾಟು ಮೌಲ್ಯ ಪ್ರತಿ ವ್ಯವಹಾರಕ್ಕೆ ರೂ. 1,116 ನಷ್ಟಿದೆ. ಆದರೆ, Paytm ನ ವಹಿವಾಟು ಮೌಲ್ಯ ನಗಣ್ಯ ರೂ.38 ಇದೆ. ಇದು, ಈ ಎಲ್ಲಾ ವಹಿವಾಟುಗಳು ಕ್ಯಾಶ್‍ಬ್ಯಾಕ್‍ಗಾಗಿ ಮಾಡಿದ ಕಡಿಮೆ ASP ವಹಿವಾಟುಗಳು ಎಂಬುದನ್ನು ಮತ್ತಷ್ಟು ದೃಢೀಕರಿಸುತ್ತದೆ.

ಈ ಎಲ್ಲ ಕಾರಣಗಳಿಂದಾಗಿ, ತಾವು ಅತಿಹೆಚ್ಚು BHIM UPI ವಹಿವಾಟಿಗೆ ಕಾರಣಕರ್ತರು ಎಂಬ Paytm ಹೇಳಿಕೆಯು ಏಕಮುಖಿ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ನಾವು ನಂಬುತ್ತೇವೆ.

ಮಾರುಕಟ್ಟೆಯ ನಿರೂಪಣೆಯು ಭಾರತದಲ್ಲಿ ಡಿಜಿಟಲ್ ಪಾವತಿಗಳ ವ್ಯಾಪಕ ಅಳವಡಿಕೆಯ ದಿಕ್ಕಿನಲ್ಲಿ ಹೊರಳಬೇಕಾಗಿದ್ದು, ಇದು ಹೆಚ್ಚು ಅನನ್ಯ ಗ್ರಾಹಕರು ಮತ್ತು ಹೆಚ್ಚಿನ ಒಟ್ಟಾರೆ ವಹಿವಾಟು ಮೌಲ್ಯದ ಹರಿವನ್ನು ಒಳಗೊಂಡಿರಬೇಕಾಗುತ್ತದೆ. ವಹಿವಾಟಿನ ಒಟ್ಟು ಪರಿಮಾಣ ಮತ್ತು ಮೌಲ್ಯವನ್ನು NPCI ಪಾರದರ್ಶಕವಾಗಿ ಹಂಚಿಕೊಳ್ಳುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಒಂದು ವೇಳೆ NPCI ಸಂಸ್ಥೆಯು ಅನನ್ಯ ಗ್ರಾಹಕರ ಸಂಖ್ಯೆಯನ್ನು ಪ್ರಕಟಿಸುವುದನ್ನು ಪರಿಗಣಿಸಿದರೆ, ಆಗ ಅದು ಶೀಘ್ರವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿಯ ಒಟ್ಟೂ ವ್ಯವಸ್ಥೆಯ ಸ್ಥಿತಿಯ ಸಮಗ್ರ ಚಿತ್ರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.

--

--